 ಚಿತ್ರ: ಶ್ರಾವಣ ಬಂತು
 ಸಾಹಿತ್ಯ: ಚಿ.ಉದಯಶಂಕರ್
 ಸಂಗೀತ: ಎಂ.ರಂಗರಾವ್
 ಗಾಯನ: ಡಾ.ರಾಜ್‍ಕುಮಾರ್

ಆಹಾ...ಲಲಲ...
ಲಲಲಾ...ಲಲಲಲ...ಹೇ ಹೇ ಹೇ..
ಮೇರಿ ಮೇರಿ ಮೇರಿ |೪|
ಐ ಲವ್ ಯೂ
ಅಂದು ಇಂದು ಮುಂದು

ಇನ್ನು ಎಂದೆಂದು ನಾನು ನಿನಗಾಗಿ
ನೀನು ನನಗಾಗಿ

ಮೇರಿ ಮೇರಿ ಮೇರಿ
ಐ ಲವ್ ಯೂ

ಮೇರಿ ಮೇರಿ ಮೇರಿ

ಐ ಲವ್ ಯೂ
ಐ ಲವ್ ಯೂ

ನನ್ನ ರೂಪ ಎಂದೋ ಕಂಡ ನೆನಪೂ ಬಾರದೇ?
ನನ್ನ ಮಾತು ಎಲ್ಲೋ ಕೇಳಿದ ಹಾಗೆ ತೋರದೇ?
ನನ್ನ ಸೇರಿ ಹಾಡಿ ಆಡಿದ ಕನಸೂ ಮೂಡದೇ?

ನಿನ್ನ ಮನವೂ ನನ್ನ ಸ್ನೇಹ ಬೇಕು ಎನ್ನದೇ?
ಈ ನನ್ನ ಪ್ರೇಮ, ಸುಳ್ಳಲ್ಲ ಜಾಣೆ, ಆನಂದವೆಲ್ಲಾ ನೀ ಒಲಿದರೇನೆ |೨|
ನಿನ್ನನು ಕಾಣಲೆ, ಸೇರಲು ಇಲ್ಲಿಗೆ ನಾ ಬಂದೆ

ಮೇರಿ ಮೇರಿ ಮೇರಿ
ಐ ಲವ್ ಯೂ

ಮೇರಿ ಮೇರಿ ಮೇರಿ
ಐ ಲವ್ ಯೂ
ಮೇರಿ ಮೇರಿ ಮೇರಿ
ಐ ಲವ್ ಯೂ
ಐ ಲವ್ ಯೂ

ಬಾನಿನಿಂದ ಸೂರ್ಯನೆಂದೂ ಬೇರೆಯಾಗದು
ಭೂಮಿಯಿಂದ ಜಾರಿ ಕಡಲು ದೂರ ಹೋಗದು
ನನ್ನ ನಿನ್ನ ಪ್ರೀತಿ ಸ್ನೇಹ ಎಂದೂ ಮಾಸದು
ಯಾವ ಶಕ್ತಿ ಬಂದರೂನೂ ಬೇರೆ ಮಾಡದು
ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ

ನಿಜವಾದ ಪ್ರೇಮ ಧ್ರುವತಾರೆಯಂತೆ
ಅನುರಾಗವೆಂದು ಸುಧೆ ಹೀರಿದಂತೆ
ಈ ನುಡಿ ಹೇಳಲೆ, ನೆನಪನು ತುಂಬಲೆ ನಾ ಬಂದೆ

ಮೇರಿ ಮೇರಿ ಮೇರಿ
ಐ ಲವ್ ಯೂ

ಮೇರಿ ಮೇರಿ ಮೇರಿ
ಐ ಲವ್ ಯೂ
ಮೇರಿ ಮೇರಿ ಮೇರಿ
ಐ ಲವ್ ಯೂ
ಐ ಲವ್ ಯೂ

ಅಂದು ಇಂದು ಮುಂದು ಇನ್ನು ಎಂದೆಂದೂ
ನಾನು ನಿನಗಾಗಿ ನೀನು ನನಗಾಗಿ |೨|
ಲಾಲಾಲಾ...ಲಾಲಾಲಾ...

Category: ಕನ್ನಡ ಚಿತ್ರಸಾಹಿತ್ಯ
Category: ಶ್ರಾವಣ ಬಂತು ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‍ಕುಮಾರ್ ಗಾಯನವರ್ಗ:ಡಾ.ರಾಜ್‍ಕುಮಾರ್ ಗಾಯನ